 
          ದಿನಾಂಕ 19-06-2022 ರ ಭಾನುವಾರ ಹರಿಹರಪುರದ ಪ್ರಬೋಧಿನೀ ಗುರುಕುಲ ದಲ್ಲಿ ನೂತನ ಛಾತ್ರ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ನಡೆದ ಬ್ರಹ್ಮಕೂರ್ಚ ಹವನದ ಮೂಲಕ 22 ವಿದ್ಯಾರ್ಥಿಗಳನ್ನು ಗುರುಕುಲಕ್ಕೆ ಸೇರಿಸಿಕೊಳ್ಳಲಾಯಿತು. ಮಂಗಳೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದ ಜೀ .ಯವರು ಹೊಸ ಮಕ್ಕಳಿಗೆ ಪ್ರಥಮ ಪಾಠ ಮಾಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ವಾಮಿ ಜಿತಕಾಮಾನಂದ ಜೀ .ಆಶೀರ್ವಚನ ಮಾಡುತ್ತಾ. " ಆಧುನಿ ಕ ಶಿಕ್ಷಣ ಪದ್ಧತಿಯಲ್ಲಿ ಪರೀಕ್ಷೆಯ ಭಯ ಹುಟ್ಟಿಸಿರುತ್ತಾರೆ. ಆದರೆ ಅಧ್ಯನಪ್ರವೃತ್ತಿಯನ್ನು ಪ್ರೇರೇಪಿಸುವುದಿಲ್ಲ ಮುಂಡಕೋಪನಿಷತ್ ನಲ್ಲಿ ವಿದ್ಯಾರ್ಥಿಯೇ ಪ್ರಶ್ನೆ ಮಾಡಿ - ಕಸ್ಮಿನ್ನು ಭಗವೋ ವಿಜ್ಞಾತೆ ಸರ್ವಮಿದಂ ವಿಜ್ಞಾತಂ ಭವತಿ.(ಯಾವುದನ್ನು ತಿಳಿದರೆ ಎಲ್ಲವನ್ನು ತಿಳಿದಂತಾಗುತ್ತದೆ) ಎಂದು ಕೇಳುತ್ತಾನೆ. ಹೀಗೆ ಪ್ರಶ್ನೆ ಮಾಡಿ ಕೇಳಿತಿಳಿಯುವ ಪದ್ಧತಿ ಗುರುಕುಲದ್ದಾಗಿದೆಬಾಹ್ಯ ಪ್ರಪಂಚದ ಅರಿವು ಹಾಗೂ ಆಂತರಿಕ ಅರಿವು ಇವೆರಡೂ ಹಕ್ಕಿಯ ರೆಕ್ಕೆಯಂತೆ ಎರಡೂ ರೆಕ್ಕೆಗಳು ಬಲವಾಗಿರಬೇಕು. ಪ್ರಪಂಚದಲ್ಲಿ ಅತ್ಯಂತ ಶಕ್ತಿಯುತವಾದದ್ದು ಮನಸ್ಸು. ನಮ್ಮ ವಿದ್ಯಾಭ್ಯಾಸದಲ್ಲಿ ಮನಸ್ಸಿನ ಬಗ್ಗೆ ಇಲ್ಲ. ಆದರೆ ಭಾರತೀಯ ಪರಂಪರೆಯಲ್ಲಿ ಉಪನಯನ ಮಾಡಿ ಗಾಯತ್ರೀ ಮಂತ್ರದ ಉಪದೇಶ ಮಾಡುತ್ತಿದ್ದರು ಆ ಮಂತ್ರದ ಅನುಷ್ಠಾನದಿಂದ ಮನಸ್ಸಿನ ನಿಯಂತ್ರಣ ಸಾಧ್ಯ. ಆ ಕಾಲದ ಎಲ್ಲ ವಿಜ್ಞಾನದ ಕ್ಷೇತ್ರಗಳಲ್ಲಿ ನಮ್ಮ ವಿಜ್ಞಾನಿಗಳು ಉನ್ನತ ಮಟ್ಟದ ಸಾಧನೆಗಳನ್ನು ಮಾಡಿದ್ದರು."ತಮ್ಮ ಪೂರ್ವಿಕರ ಬಗ್ಗೆ ಹೆಮ್ಮೆ ಪಡದ ದೇಶ ಅವನತಿಯತ್ತ ಸಾಗುತ್ತದೆ" ಎಂಬುದು ಸ್ವಾಮಿ ವಿವೇಕಾನಂದರ ಮಾತು. ನಮ್ಮ ಪೂರ್ವಜರ ಅಪ್ರತಿಮ ಸಾಧನೆ ಗಳ ಅಧ್ಯಯನ ಈ ಗುರುಕುಲದಲ್ಲಿ ನಡೆಯಬೇಕು. ಅದಕ್ಕೆ ಪ್ರೊತ್ಸಾಹ ನೀಡಿ ಬೆಳೆಸುವ ಕಾರ್ಯ ಸಮಾಜದಿಂದಾಗಬೇಕು " ಎಂದರು.
ಮುಖ್ಯ ಭಾಷಣ ನೆರವೇರಿಸಿದ ಆರೆಸ್ಸೆಸ್ ನ ಅಖಿಲ ಭಾರತೀಯ ಕಾರ್ಯಕಾರಿ ಮಂದಲಿಯ ಆಮಂತ್ರಿತ ಸದಸ್ಯರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ರವರು ಸಮಾಜದಲ್ಲಿ ಹಿಂದುತ್ವದ ಜಾಗರಣದ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ವು ಶಾಖೆಯ ಮೂಲಕ ಮಾಡುತ್ತಿದೆ. ಕಳೆದ ಎರಡು ದಶಕದಲ್ಲಿ ಶಾಖೆಯ ಜೊತೆ ಜೊತೆಗೆ ಅನೇಕ ಆಯಾಮಗಳು ಜೋಡಣೆ ಯಾದವು . ಡಾ. ಭಾರತೀರಮಣಾಚಾರ್ಯ, ನ.ಕೃಷ್ಣಪ್ಪ, ರೋಹಿಡೇಕರ್, ಮುಎಂಬಡಿತ್ತಾಯ ಮುಂತಾದ ತಜ್ಞರ ಸತತ ಪ್ರಯತ್ನ ದ ಫಲವೇ ಪ್ರಬೋಧಿನೀ ಗುರುಕುಲ. ಇಂದು ಕರ್ನಾಟಕದಲ್ಲಿ ಸಂಘದ ಆಶ್ರಯದಲ್ಲಿ ಮೂರು ಗುರುಕುಲ ಗಳು ಕಾರ್ಯನಿರ್ವಹಿಸುತ್ತಿವೆ.
ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿ. ಶಿಕ್ಷಕರನ್ನು ಗುರುಕುಲ ದಲ್ಲಿ ಆಚಾರ್ಯ ಎನ್ನುತ್ತೇವೆ. ಹೊರಗಿನ ಪ್ರಪಂಚವನ್ನು ನೋಡಿದಾಗ ನಮ್ಮ ದೇಶ ದುರ್ಬಲವಾಗಿದೆ ಅನಿಸುತ್ತದೆ. ಆದರೆ ಭಾರತಕ್ಕೆ ಜನ್ಮದಿನಾಂಕವೇ ಇಲ್ಲ...ಆದ್ದರಿಂದ ಭಾರತಕ್ಕೆ ನಾಶದ ದಿನಾಂಕವೂ ಇಲ್ಲ..ನಮ್ಮದು ದೇವ ನಿರ್ಮಿತ ದೇಶ. ವಸುಧೈವ ಕುಟುಂಬಕಂ ಎಂದು ಸಾರಿದ ಸಂಸ್ಕೃತಿ ನಮ್ಮದು..ಇಂತಹ ಉದಾತ್ತ ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯ ಗುರುಕುಲ ದಲ್ಲಿ ನಡೆಯುತ್ತಿದೆ.
ವಿಜ್ಞಾನ ಬೆಳೆದಂತೆಲ್ಲ ಆಧುನಿಕತೆಯ ಪರಿಣಾಮವಾಗಿ ನಾವು ವೇಷ ಧರಿಸಿ ಬದುಕುವಂತಾಗಿದೆ. ಒಂದರ ನಾಶದಿಂದ ಇನ್ನೊಂದರ ಉದಯ ಎಂಬುದು ಆಧುನಿಕ ವಿಜ್ಞಾನದ ತಿರುಳು. ಆದರೆ ಒಂದರ ಆಧಾರದಲ್ಲಿ ಇನ್ನೊಂದರ ಉದಯ ಎಂಬುದು ಭಾರತದ ನಂಬಿಕೆ.
ಸಂಘೇ ಶಕ್ತಿ ಕಲೌ ಯುಗೇ ಎಂಬಂತೆ. ಕಲಿಯುಗದಲ್ಲಿ ಸಂಘಟನೆಯೇ ನಿಜವಾದ ಶಕ್ತಿ. ಅಂತಹ ಸಂಘಟನೆಯ ಅನೇಕ ಮುಖಗಳಲ್ಲಿ ಒಂದು ಈ ಗುರುಕುಲಗಳು. ಆಧ್ಯಾತ್ಮಿಕ ಹಾಗೂ ವೈಚಾರಿಕ ಜ್ಞಾನ ಭಂಡಾರದ ರಕ್ಷಣೆಯೇ ಗುರುಕುಲ ದ ಪರಮ ಗುರಿ. ಆಧುನಿಕ ವಿದ್ಯಾಸಂಸ್ಥೆ ಗಳು ಬೆಳೆದಂತೆ ಗುರುಕುಲ ಕೇಂದ್ರ ಗಳೂ ವಿಕಾಸವಾಗಬೇಕಿದೆ.
ಕೇವಲ ಪರೀಕ್ಷೆ ಗಳಲ್ಲಿ ಅಂಕ ಸಂಪಾದಿಸುವುದೇ ವಿದ್ಯೆ ಅಲ್ಲ. ಕಲಿತವರು ಸಮಾಜಕ್ಕೆ ಹೇಗೆ ಉಪಕಾರಿಗಳಾಗುತ್ತಾರೆ ಎಂಬುದು ಅತ್ಯಂತ ಮುಖ್ಯ ವಾದ ವಿಷಯ. ಗುರುಕುಲ ಪದ್ಧತಿಯಲ್ಲಿ ಅಧ್ಯಯನ ಮಾಡಿದವರು ಸಮಾಜೋಪಯೋಗಿ ಬದುಕು ಸಾಗಿಸುತ್ತಾರೆ ಎಂಬುದನ್ನು ಘಂಟಾಘೋಷವಾಗಿ ಹೇಳಬಹುದಾಗಿದೆ. ವೈಯಕ್ತಿಕ ಉನ್ನತಿ ಯೊಂದಿಗೆ ರಾಷ್ಟ್ರದ ಹಾಗೂ ವಿಶ್ವದ ಉನ್ನತಿ ಸಾಧಿಸಿದಾಗಲೇ ಬದುಕು ಸಾರ್ಥಕವಾಗುತ್ತದೆ. ಅಂತಹ ಸಾರ್ಥಕ ಬದುಕು ಸಾಗಿಸಲು ಬೇಕಾದ ಸಂಸ್ಕಾರಗಳನ್ನು ಪ್ರಬೋಧಿನೀ ಗುರುಕುಲ ದಲ್ಲಿ ನೀಡಲಾಗುತ್ತಿದೆ." ಎಂದರು
ಅಭ್ಯಾಗತರಾಗಿ ಆಗಮಿಸಿದ್ದ ಯುವ ಉದ್ಯಮಿ, ಬೆಂಗಳೂರಿನ ಪ್ರಸಿದ್ಧ ಜ್ಯಾಮಿತಿ ಆರ್ಕಿಟೆಕ್ಚರಲ್ ಸ್ಟುಡಿಯೋ ದ ಸಂಸ್ಥಾಪಕರೂ ಆದ ಶ್ರೀ ಹೆಚ್.ಸಿ ಆಶ್ರಯ್ ರವರು ಲೌಕಿಕ ಪ್ರಪಂಚದಿಂದ ದೂರವಾದಷ್ಟೂ ಬದುಕು ಸುಲಭವಾಗುತ್ತದೆ. ಆದರೆ ಅನಿವಾರ್ಯ ವಾಗಿ ನಾವು ಆಧುನಿಕತೆಗೆ ಹೊಂದಿಕೊಳ್ಳಬೇಕಾಗಿದೆ. ಆಧುನಿಕತೆಯ ಜೊತೆ ಜೊತೆಗೇ ಹಿಂದಿನ ಸಂಪ್ರದಾಯಗಳನ್ನು ಪಾಲಿಸಬೇಕು ಹಾಗಾದಾಲೇ ಜೀವನ ಶಾಂತಿಯಿಂದ ಕೂಡಿರುತ್ತದೆ. ಗುರುಕುಲದಲ್ಲಿ ಇಂತಹ ಪ್ರಯತ್ನ ನಿರಂತರ ನಡೆಯುತ್ತಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆಎಂದು ಅಭಿಪ್ರಾಯ ಪಟ್ಟರು.
ಗುರುಕುಲದ ಆಚಾರ್ಯರಾದ ಶ್ರೀ ಪ್ರಸನ್ನಕುಮಾರ್ ರವರು ಸ್ವಾಗತಿಸಿದರು. ಪ್ರಬೋಧಿನೀ ಟ್ರಸ್ಟ್ ನ ಸದಸ್ಯ ಶ್ರೀ ವಿಜಯಕುಮಾರ್ ರವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ಪ್ರಬೋಧಿನೀ ಟ್ರಸ್ಟ್ ನ ನಿರ್ವಾಹಕ ವಿಶ್ವಸ್ತರಾದ ಶ್ರೀ ಹೆಚ್.ಬಿ. ರಾಜಗೋಪಾಲ್ ರವರು ವಹಿಸಿಕೊಂಡಿದ್ದರು.
ಪ್ರಬೋಧಿನೀ ಟ್ರಸ್ಟ್ ನ ಸದಸ್ಯರು ಹಾಗೂ ಹಾಗೂ ಸುತ್ತಮುತ್ತಲಿನ ಗುರುಕುಲ ಬಂಧುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು
 
	 
	 
	 
	 
	 
	 
	 
	 
	 
	